ಶಾಕಾಂಬರಿ ದೇವಿ
ಶಾಕಾಂಬರಿ ದೇವಿ
ಚೌಡೇಶ್ವರಿ  ದೇವಿ
ಚೌಡೇಶ್ವರಿ ದೇವಿ
ಮಹಾ ಗಣಪತಿ
ಮಹಾ ಗಣಪತಿ
ಪರ್ವತ ಮಲ್ಲಿಕಾರ್ಜುನ ಸ್ವಾಮಿ
ಪರ್ವತ ಮಲ್ಲಿಕಾರ್ಜುನ ಸ್ವಾಮಿ
ಆಂಜನೇಯ ಸ್ವಾಮಿ
ಆಂಜನೇಯ ಸ್ವಾಮಿ
ನವಗೃಹ
ನವಗೃಹ

ದೇವಸ್ಥಾನದ ಬಗ್ಗೆ

ಶ್ರೀ ಬನಶಂಕರಿ ದೇವಸ್ಥಾನವು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯಲ್ಲಿದೆ. ಬೆಂಗಳೂರಿನ ಅತ್ಯಂತ ಜನಪ್ರಿಯ ಪೂಜಾ ಸ್ಥಳಗಳಲ್ಲಿ ಒಂದಾಗಿದೆ. ಶ್ರೀ ಬನಶಂಕರಿ ದೇವಿಯಲ್ಲಿ ಭಕ್ತಾದಿಗಳು ಬಲವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಅವರು  ಪ್ರಾಮಾಣಿಕವಾಗಿ ಪ್ರಾರ್ಥನೆಗಳನ್ನು ಮಾಡಿ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ . ದೇವಿಯ ನಂಬಿಕೆ ಎಷ್ಟು ಪ್ರಬಲವಾದುದೆಂದರೆ ಪ್ರತಿ ದಿನವೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಶ್ರೀ ಬನಶಂಕರಿ ದೇವಿಯನ್ನು ಶಾಕಾಂಬರಿಯೆಂದು ಕೂಡ ಕರೆಯುತ್ತಾರೆ.

ಶ್ರೀ ಬನಶಂಕರಿ ದೇವಾಲಯದ ಇತಿಹಾಸವು 1915 ರ ಹಿಂದಿನಿಂದ ಬಂದಿದೆ. ಈ ದೇವಸ್ಥಾನವನ್ನು ಬನಶಂಕರಿ ದೇವಿಯ ಪರಮ ಭಕ್ತರಾದ ಬಸಪ್ಪ ಶೆಟ್ಟಿ ಅವರು ಸ್ಥಾಪಿಸಿದರು. ಅವರು ಬಿಜಾಪುರ ಜಿಲ್ಲೆಯ ಪವಿತ್ರ ಸ್ಥಳವಾದ ಬಾದಾಮಿಯಿಂದ ದೇವತೆಯನ್ನು ತಂದು ದೇವಾಲಯದ ಒಳಗೆ ಸ್ಥಾಪಿಸಿದರು

ಶ್ರೀ ಬನಶಂಕರಿ ಅಮ್ಮ ದೇವಸ್ಥಾನ  ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

ಶ್ರೀ ಬನಶಂಕರಿ ದೇವಸ್ಥಾನದ ವಿಶಿಷ್ಟತೆ

ಬೆಂಗಳೂರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ರಾಹುಕಾಲದಲ್ಲಿ ವಿಶೇಷವಾಗಿ ಪೂಜೆ ನಡೆಸಲಾಗುತ್ತದೆ ಮತ್ತು ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ರಾಹುಕಾಲ ಪ್ರತಿಕೂಲವಾದ ಸಮಯ ಎಂದು ನಂಬಲಾಗಿದೆ. ಇದರಲ್ಲಿ ಭಕ್ತಾದಿಗಳು ಶ್ರೀ ಬನಶಂಕರಿ ದೇವರನ್ನು ಪೂಜಿಸುವರೆಂದರೆ ರಾಹುಕಲಾದಲ್ಲಿ ಎಲ್ಲ ಸಂಕಷ್ಟಗಳನ್ನೂ ಜೀವನ ಕೊರತೆಗಳನ್ನೂ ಜಯಿಸಲು ಸಾಧ್ಯ ಎಂದು ನಂಬಲಾಗಿದೆ. ಈ ದೇವಾಲಯವು ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ಭಾರೀ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಶ್ರೀ ಬನಶಂಕರಿ ದೇವಿಗೆ ರಾಹುಕಾಲದಲ್ಲಿ ಮಹಿಳಾ ಭಕ್ತಾದಿಗಳು ವಿಶೇಷವಾಗಿ ನಿಂಬೆಹಣ್ಣಿನ ಆರತಿಯನ್ನು ಬೆಳಗುತ್ತಾರೆ.

 

ಈ ಸಂಪ್ರದಾಯದ ಹಿಂದಿರುವ ಒಂದು ಜನಪದವೆಂದರೆ, ಒಮ್ಮೆ ಮೂರು ಮುತ್ತೈದೆಯರು ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ರಾಹುಕಾಲದಲ್ಲಿ ಪೂಜೆ ಮಾಡಲು ದೇವಸ್ಥಾನದ ಅರ್ಚಕರಿಗೆ ಕೇಳಿದರು. ಅರ್ಚಕರು ಮೊದಲಿಗೆ ಮಾಡಲು ನಿರಾಕರಿಸಿದರೂ, ಮುತ್ತೈದೆಯರು ಈ ಸಮಯದಲ್ಲಿ ದೇವಿಗೆ ಪೂಜೆ ಮಾಡಿ ಎಂದು ಕೇಳಿಕೊಂಡರು. ಪೂಜೆ ಪೂರ್ಣಗೊಂಡ ನಂತರ  ಅರ್ಚಕರು ಪ್ರಸಾದವನ್ನು ನೀಡಲು ಹೊರಬರುತ್ತಾರೆ. ಆದರೆ ಮುತ್ತೈದೆಯರು ಕಣ್ಮರೆಯಾಗಿದ್ದಾರೆಂದು ಕಂಡುಕೊಳ್ಳುತ್ತಾರೆ. ಆಗಿನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಶಾಸ್ತ್ರಿಗಳು ರಾಹುಕಾಲದಲ್ಲಿ ದೇವಿಗೆ ಪೂಜೆಯನ್ನು ಪ್ರಾರಂಭಿಸಿದ್ದಾರೆ. ರಾಹುಕಾಲದಲ್ಲಿ ದೇವಿಗೆ ತಮ್ಮ ತಮ್ಮ ಸಂಕಷ್ಟಗಳನ್ನು ಪ್ರಾರ್ಥಿಸಿದರೆ ಒಳ್ಳೆಯದಾಗುತ್ತದೆ ಎಂದು ಭಕ್ತಾದಿಗಳ ನಂಬಿಕೆ. ಅದೇ ರೀತಿ ಭಕ್ತಾದಿಗಳಿಗೆ ಅನುಕೂಲವೂ ಆಗುತ್ತಿದೆ. ಈ ರಾಹುಕಾಲ ಪೂಜೆಯನ್ನು ಅಂದಿನ ಪ್ರಧಾನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಸ್ವಾಮಿಗಳ ವಂಶಸ್ಥರೇ ನಡೆಸಿಕೊಂಡು ಬಂದಿದ್ದಾರೆ.

ದೇವಸ್ಥಾನದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವ ಮಾರ್ಗವೂ ಬಹಳ ಆಸಕ್ತಿದಾಯಕವಾಗಿದೆ. ಭಕ್ತರು ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಒಳಗೆ ತಿರುಳು ತೆಗೆಯುವ ಮೂಲಕ ದೀಪವನ್ನು ಮಾಡಿ ಅದರಲ್ಲಿ ತೈಲವನ್ನು ಹಾಕಿ ದೀಪ ಬೆಳಗುತ್ತಾರೆ.

ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳು  ಶುಭದಾಯಕವೆಂದು ಪರಿಗಣಿಸಲಾಗಿದೆ ಮತ್ತು ಈ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. 

ಪ್ರತಿವರ್ಷ ದೇವಾಲಯದಲ್ಲಿ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ. ಪುಷ್ಯ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜಾತ್ರೆ,  ದೇವಾಲಯದ ವಾರ್ಷಿಕೋತ್ಸವ, ದಸರಾ ಉತ್ಸವ  ಮತ್ತು  ಭಾದ್ರಪದ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜನ್ಮೋತ್ಸವ .

ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿದೆ.

 

ಶ್ರೀ ಬನಶಂಕರಿ ದೇವಾಲಯದ ಇತಿಹಾಸ

445total visits,2visits today