bsk (17)

ಕಾರ್ಯಕ್ರಮಗಳು

May
11
Sat
2019
all-day Temple Anniversary – ದೇವಸ್ಥಾನ ವಾ... @ Sri Banashankari Temple, Bangalore
Temple Anniversary – ದೇವಸ್ಥಾನ ವಾ... @ Sri Banashankari Temple, Bangalore
May 11 all-day
Temple Anniversary - ದೇವಸ್ಥಾನ ವಾರ್ಷಿಕೋತ್ಸವ @ Sri Banashankari Temple, Bangalore | Bengaluru | Karnataka | India
Sri Banashankari Temple Anniversary ಶ್ರೀ ಬನಶಂಕರಿ ದೇವಸ್ಥಾನ ವಾರ್ಷಿಕೋತ್ಸವ 11 May 2019  11 ಮೇ 2019  

ಸೀರೆ ಹರಾಜು

ಪ್ರತಿ ಶುಕ್ರವಾರದಂದು ದೇವಾಲಯದಲ್ಲಿ ಸೀರೆ ಹರಾಜು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ದೇವಿಗೆ ಹರಕೆಯನ್ನಾಗಿ ನೀಡಿದ ಸೀರೆಗಳನ್ನು ಬಹಿರಂಗವಾಗಿ ಹರಾಜು ಮಾಡಲಾಗುತ್ತದೆ.
ಭಾಗವಹಿಸುವಿಕೆಯು ಪ್ರತಿಯೊಬ್ಬರಿಗೂ ಮುಕ್ತವಾಗಿದೆ.

ದೇವಾಲಯದ ಆವರಣದಲ್ಲಿ ಪ್ರತಿ ಶುಕ್ರವಾರದಂದು ಬೆಳಿಗ್ಗೆ 11.30ಕ್ಕೆ ಸೀರೆ ಹರಾಜು ಪ್ರಾರಂಭವಾಗುತ್ತದೆ.

ಶ್ರೀ ಬನಶಂಕರಿ ದೇವಾಲಯಕ್ಕೆ ಸುಸ್ವಾಗತ

ಶ್ರೀ ಬನಶಂಕರಿ ದೇವಸ್ಥಾನವು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯಲ್ಲಿದೆ. ಬೆಂಗಳೂರಿನ ಅತ್ಯಂತ ಜನಪ್ರಿಯ ಪೂಜಾ ಸ್ಥಳಗಳಲ್ಲಿ ಒಂದಾಗಿದೆ. ಶ್ರೀ ಬನಶಂಕರಿ ದೇವಿಯಲ್ಲಿ ಭಕ್ತಾದಿಗಳು ಬಲವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಅವರು  ಪ್ರಾಮಾಣಿಕವಾಗಿ ಪ್ರಾರ್ಥನೆಗಳನ್ನು ಮಾಡಿ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ . ದೇವಿಯ ನಂಬಿಕೆ ಎಷ್ಟು ಪ್ರಬಲವಾದುದೆಂದರೆ ಪ್ರತಿ ದಿನವೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಶ್ರೀ ಬನಶಂಕರಿ ದೇವಿಯನ್ನು ಶಾಕಾಂಬರಿಯೆಂದು ಕೂಡ ಕರೆಯುತ್ತಾರೆ.

 

ಶ್ರೀ ಬನಶಂಕರಿ ದೇವಾಲಯದ ಇತಿಹಾಸವು 1915 ರ ಹಿಂದಿನಿಂದ ಬಂದಿದೆ. ಈ ದೇವಸ್ಥಾನವನ್ನು ಬನಶಂಕರಿ ದೇವಿಯ ಪರಮ ಭಕ್ತರಾದ ಬಸಪ್ಪ ಶೆಟ್ಟಿ ಅವರು ಸ್ಥಾಪಿಸಿದರು. ಅವರು ಬಿಜಾಪುರ ಜಿಲ್ಲೆಯ ಪವಿತ್ರ ಸ್ಥಳವಾದ ಬಾದಾಮಿಯಿಂದ ದೇವತೆಯನ್ನು ತಂದು ದೇವಾಲಯದ ಒಳಗೆ ಸ್ಥಾಪಿಸಿದರು

ಶ್ರೀ ಬನಶಂಕರಿ ಅಮ್ಮ ದೇವಸ್ಥಾನ  ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.


ಶ್ರೀ ಬನಶಂಕರಿ ಸನ್ನಿಧಿಯಲ್ಲಿ ಇರುವ ದೇವತೆಗಳು:

  • ಶ್ರೀ ಶಾಕಾಂಬರಿ ದೇವಿ
  • ಶ್ರೀ ಚೌಡೇಶ್ವರಿ ದೇವಿ
  • ಶ್ರೀ ಮಹಾ ಗಣಪತಿ
  • ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿ
  • ಶ್ರೀ ಆಂಜನೇಯ ಸ್ವಾಮಿ
  • ನವಗ್ರಹಗಳು

ಪೂಜಾ ಸಮಯಗಳು

ದಿನ ಬೆಳಿಗ್ಗೆ ಸಂಜೆ
ಮಂಗಳವಾರ 6-00AM to 1-00PM 3-00PM to 9-00PM
ಶುಕ್ರವಾರ 6-00AM to 2-30PM 4-30PM to 9-30PM
ಭಾನುವಾರ 6-00AM to 1-30PM 4-30PM to 9-00PM
ಇತರ ವಾರ ದಿನಗಳು 6-00AM to 1-00PM 4-30PM to 8-30PM
21

ಸುದ್ಧಿ ಮಾಧ್ಯಮ

ಶ್ರೀ ಬನಶಂಕರಿ ದೇವಸ್ಥಾನದ ವಿಶಿಷ್ಟತೆ

ಬೆಂಗಳೂರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ರಾಹುಕಾಲದಲ್ಲಿ ವಿಶೇಷವಾಗಿ ಪೂಜೆ ನಡೆಸಲಾಗುತ್ತದೆ ಮತ್ತು ಪ್ರಾರ್ಥನೆಗಳನ್ನು ಮಾಡಲಾಗುತ್ತದೆ. ರಾಹುಕಾಲ ಪ್ರತಿಕೂಲವಾದ ಸಮಯ ಎಂದು ನಂಬಲಾಗಿದೆ. ಇದರಲ್ಲಿ ಭಕ್ತಾದಿಗಳು ಶ್ರೀ ಬನಶಂಕರಿ ದೇವರನ್ನು ಪೂಜಿಸುವರೆಂದರೆ ರಾಹುಕಲಾದಲ್ಲಿ ಎಲ್ಲ ಸಂಕಷ್ಟಗಳನ್ನೂ ಜೀವನ ಕೊರತೆಗಳನ್ನೂ ಜಯಿಸಲು ಸಾಧ್ಯ ಎಂದು ನಂಬಲಾಗಿದೆ. ಈ ದೇವಾಲಯವು ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ಭಾರೀ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಶ್ರೀ ಬನಶಂಕರಿ ದೇವಿಗೆ ರಾಹುಕಾಲದಲ್ಲಿ ಮಹಿಳಾ ಭಕ್ತಾದಿಗಳು ವಿಶೇಷವಾಗಿ ನಿಂಬೆಹಣ್ಣಿನ ಆರತಿಯನ್ನು ಬೆಳಗುತ್ತಾರೆ.

 

ಈ ಸಂಪ್ರದಾಯದ ಹಿಂದಿರುವ ಒಂದು ಜನಪದವೆಂದರೆ, ಒಮ್ಮೆ ಮೂರು ಮುತ್ತೈದೆಯರು ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ರಾಹುಕಾಲದಲ್ಲಿ ಪೂಜೆ ಮಾಡಲು ದೇವಸ್ಥಾನದ ಅರ್ಚಕರಿಗೆ ಕೇಳಿದರು. ಅರ್ಚಕರು ಮೊದಲಿಗೆ ಮಾಡಲು ನಿರಾಕರಿಸಿದರೂ, ಮುತ್ತೈದೆಯರು ಈ ಸಮಯದಲ್ಲಿ ದೇವಿಗೆ ಪೂಜೆ ಮಾಡಿ ಎಂದು ಕೇಳಿಕೊಂಡರು. ಪೂಜೆ ಪೂರ್ಣಗೊಂಡ ನಂತರ  ಅರ್ಚಕರು ಪ್ರಸಾದವನ್ನು ನೀಡಲು ಹೊರಬರುತ್ತಾರೆ. ಆದರೆ ಪತಿವ್ರತೆಯರು ಕಣ್ಮರೆಯಾಗಿದ್ದಾರೆಂದು ಕಂಡುಕೊಳ್ಳುತ್ತಾರೆ. ಆಗಿನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಶಾಸ್ತ್ರಿಗಳು ರಾಹುಕಾಲದಲ್ಲಿ ದೇವಿಗೆ ಪೂಜೆಯನ್ನು ಪ್ರಾರಂಭಿಸಿದ್ದಾರೆ. ರಾಹುಕಾಲದಲ್ಲಿ ದೇವಿಗೆ ತಮ್ಮ ತಮ್ಮ ಸಂಕಷ್ಟಗಳನ್ನು ಪ್ರಾರ್ಥಿಸಿದರೆ ಒಳ್ಳೆಯದಾಗುತ್ತದೆ ಎಂದು ಭಕ್ತಾದಿಗಳ ನಂಬಿಕೆ. ಅದೇ ರೀತಿ ಭಕ್ತಾದಿಗಳಿಗೆ ಅನುಕೂಲವೂ ಆಗುತ್ತಿದೆ. ಈ ರಾಹುಕಾಲ ಪೂಜೆಯನ್ನು ಅಂದಿನ ಪ್ರಧಾನ ಅರ್ಚಕರಾದ ಶ್ರೀ ಸೂರ್ಯನಾರಾಯಣ ಸ್ವಾಮಿಗಳ ವಂಶಸ್ಥರೇ ನಡೆಸಿಕೊಂಡು ಬಂದಿದ್ದಾರೆ.

ಇದರ ಬಗ್ಗೆ ಇನ್ನಷ್ಟು ಓದಿ

temple-light

ಸಂಪರ್ಕದಲ್ಲಿರಿ...

ಶ್ರೀ ಬನಶಂಕರಿ ದೇವಾಲಯದ ಎಲ್ಲಾ ಪ್ರಮುಖ ಘಟನೆಗಳು ಮತ್ತು ಉತ್ಸವಗಳಲ್ಲಿ ಬಗ್ಗೆ ತಿಳಿದಿರಲು ನಮ್ಮ ವೆಬ್ಸೈಟ್ನಲ್ಲಿ ನೋಂದಣಿ ಮಾಡಿ

1117total visits,4visits today